ಒಳ್ಳೆಯ ಸ್ನೇಹಿತನ ಲಕ್ಷಣಗಳು
defination of friend
ಒಳ್ಳೆಯ ಸ್ನೇಹಿತನ ಲಕ್ಷಣಗಳು ಏನು ಎಂಬುದನ್ನು ಭರ್ತೃಹರಿಯು ನೀತಿಶ ತ ಕದಲ್ಲಿ ಹೀಗೆ ಹೇಳಿದ್ದಾನೆ
ಪಾಪತ್ ನಿವಾರಯತಿ
ಯೋಜಯತೆ ಹಿತಾಯ
ಗುಹ್ಯ೦ ನಿಗೂಹತಿ
ಗುಣಾ ನ್ ಪ್ರಕಟೀ ಕರೋತಿ
ಆಪ ದ್ ಗತಂ ಚ ನ
ಜಹಾತಿ ಕಾಲೆ
ಸನ್ಮಿತ್ರ ಲಕ್ಷಣಂ
ಇದಂ ಪ್ರವ ದಂತಿ ಸಂತಃ
ಇದರ ಅರ್ಥ ಏನೆಂದರೆ ಉತ್ತಮ ಸಖ ಏನು ಮಾಡುತ್ತಾನೆ ಹೇಗೆ ಇರುತ್ತಾನೆ ಎಂದರೆ ಸ್ನೇಹಿತ ತಪ್ಪು ಮಾಡಿದಾಗ ಅವನ ತಪ್ಪು ಅರ್ಥ ಮಾಡಿಸಿ, ತಿದ್ದುವನು.
ಅಷ್ಟೆ ಅಲ್ಲದೆ ಅದಕ್ಕೆ ಪರಿಹಾರ ನೀ ಡಿ, ಸರಿಯಾದ ದಾರಿಯಲ್ಲಿ ಹೋಗುವಂತೆ ಮಾರ್ಗದರ್ಶನ ನೀಡುವನು. ಸ್ನೇಹಿತ ತನ್ನ ರಹಸ್ಯ ವಿಷಯಗಳನ್ನು ಹೇಳಿಕೊಂಡಾಗ ಯಾರಿಗೂ ಹೇಳದೆ ಕಾಪಾಡುವನು. ಸ್ನೇಹಿತನ ಲ್ಲಿ ಲೋಪ ದೋಷಗಳು ಇದ್ದರೆ, ಆತನ ಮನಸ್ಸಿಗೆ ನೋವಾಗದಂತೆ, ಹಿತವಾದ ಮಾತುಗಳಿಂದ ಹೇಳುವನು. ಸ್ನೇಹಿತ ಕಷ್ಟದಲ್ಲಿ ಇದ್ದಾಗ, ಪಲಾಯನ ಮಾಡದೇ, ಜೊತೆಯಲ್ಲೇ ಇದ್ದು ಆತನ ಕಷ್ಟದಲ್ಲಿ ಭಾಗಿ ಆಗುವವನು.
ಇದೆ ಉತ್ತಮ ಸ್ನೇಹಿತನ ಲಕ್ಷಣಗಳು ಎಂದು ಸಂತರು ಹೇಳಿದ್ದಾರೆ ಎಂಬುದನ್ನು ನೀತಿ ಶತಕ ದಲ್ಲಿ ಹೇಳಿದ್ದಾರೆ
ನಿಮಗೆ ಈ ರೀತಿ ಸಖಿ ಇದ್ದರೆ ನೀವೇ ಪುಣ್ಯವಂತರು😇😍
Comments
Post a Comment