ಒಡೆದ ಪಾದಗಳಿಗೆ ಮನೆಮದ್ದುಗಳು
.👍ಒಡೆದ ಪಾದಗಳಿಗೆ ಮನೆಮದ್ದುಗಳು
🦶1. ಒಡೆದ ಪಾದಗಳಿಗೆ,ಬಾಳೆಹಣ್ಣಿನ ಪೇಸ್ಟ್ ಹಚ್ಚಿ,15-20 min ನಂತರ ಉಗುರು ಬೆಚ್ಚಗಿನ ನೀರಲ್ಲಿ ತೊಳೆದುಕೊಳ್ಳಿ.
🦶2.ಅರ್ಧ ಬಕೆಟ್ ಬೆಚ್ಚಗಿನ ನೀರಿಗೆ , ಅರ್ಧ ಕಪ್ ಜೇನುತುಪ್ಪ ಹಾಕಿ, 15-20 min ವರೆಗೂ ಕಾಲನ್ನು ಅದರಲ್ಲಿ ಇರಿಸಿ,ನಂತರ ತಣ್ಣೀರಿನಿಂದ ತೊಳೆಯರಿ.
🦶3. ಮಲಗುವ ಮುಂಚೆ ಪಾದಗಳಿಗೆ ತೆಂಗಿನೆಣ್ಣೆ ಹಚ್ಚಿ.
🦶4. ವಿಟಮಿನ್ ಈ ಕ್ಯಾಪ್ಸೂಲ್ ನಿಂದ ಕಾಲನ್ನು ಮಸಾಜ್ ಮಾಡಿ, ಸಾಕ್ಸ್ ಹಾಕಿಕೊಂಡು ಮಲಗಿ. ಮುಂಜಾನೆ ತೊಳೆದುಕೊಳ್ಳಿ
🦶5. ಪುದೀನಾ ಎಲೆ ಪೇಸ್ಟ್ ಮತ್ತು ಆಲಿವ್ ಎಣ್ಣೆ ಮಿಕ್ಸ್ ಮಾಡಿ ಹಚ್ಚಿ, ಒಣಗಿದ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ
🦶6.ಬೇವಿನ ಎಲೆ ಪೇಸ್ಟ್ ಗೆ ಅಡುಗೆ ಅರಿಶಿನ ಸೇರಿಸಿ,ಮಿಕ್ಸ್ ಮಾಡಿ ಹಚ್ಚಿ, ಒಣಗಿದ ನಂತರ ತೊಳೆದುಕೊಳ್ಳಿ.
🦶7. ಮೊಸರು ಹಚ್ಚಿ, ಮಸಾಜ್ ಮಾಡಿ,ಸ್ವಲ್ಪ ಸಮಯದ ನಂತರ,ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
🦶8. 3ts ಅಕ್ಕಿಹಿಟ್ಟು, 2-3 ಹನಿ ಆ್ಯಪಲ್ cidar ವಿನೆಗರ್, 1 ts ಜೇನುತುಪ್ಪ ಚೆನ್ನಾಗಿ ಮಿಕ್ಸ್ ಮಾಡಿ, ಪಾದ ಗಳನ್ನು 10 min ಬೆಚ್ಚಗಿನ ನೀರಲ್ಲಿ ಇರಿಸಿ ನಂತರ ಮೇಲಿನ ಪೇಸ್ಟ್ ಒಡೆದ ಕಾಲಿಗೆ ಹಚ್ಚಿ ಮಸಾಜ್ ಮಾಡಿ.
🦶ಪ್ರತಿಯೊಂದು ಮನೆಮದ್ದು ಹಚ್ಚುವ ಮೊದಲು, ಪಾದ ಗಳನ್ನ ಚೆನ್ನಾಗಿ ತೊಳೆದುಕೊಂಡು,ಒರೆಸಿಕೊಂಡು ನಂತರ ಹಚ್ಚಬೇಕು👍
Comments
Post a Comment