ಮಕ್ಕಳ ಆರೋಗ್ಯ
VedicRoots youtube channel collections
/#ಮಕ್ಕಳ_ಆರೋಗ್ಯ_/#infant_foods
ಮಗುವಿಗೆ ಒಂದು ವರ್ಷ ಆಗುವವರೆಗೂ ತಾಯಿಯ ಮೊಲೆ ಹಾಲಿನ ಸಮಾನ ಯಾವುದು ಇಲ್ಲ ಎನ್ನುತ್ತಾರೆ ಹಿರಿಯರು.ಅದರ ಜೊತೆ ಐದು ತಿಂಗಳು ತುಂಬಿದಾಗ,ಸ್ವಲ್ಪ ಸ್ವಲ್ಪ ಹಿಸುಕಿದ ಮೆತ್ತನೆ ಅನ್ನ,ಕ್ರಮೇಣ ಹಣ್ಣಿನ ರಸ ,ರಾಗಿ ಸರಿ, cerelac ಇತ್ಯಾದಿ ನೀಡಬಹುದು.ಒಂದರಿಂದ ಒಂದೂವರೆ ವರ್ಷದ ನಂತರ ದೊಡ್ಡವರು ಸೇವಿಸುವ ಆಹಾರ ನೀಡಬಹುದು.
ಕೆಲವು ಟಿಪ್ಸ್ (7 ತಿಂಗಳ ಮೇಲೆ ನೀಡಬಹುದು)
1. ಶಿಶುವಿಗೆ ಹೊಟ್ಟೆ ಉಬ್ಬರ ಆಗಿದ್ದರೆ, ಒಂದು ಬೆಳ್ಳುಳ್ಳಿ ಕಾಳು ತಾಯಿಯ ಹಾಲಲ್ಲಿ ತೀದಿ ಸ್ವಲ್ಪ ಬಿಸಿ ಮಾಡಿ. ತಣ್ಣಗಾದ ನಂತರ, ಒಂದೆರೆಡು ಹನಿ ಕುಡಿಸಿ. ಒಂದು ವರ್ಷದ ಮಗು ಆದರೆ, ಅರ್ಧ ಸ್ಪೂನ್ ಹಾಕಿ.
2. ಬಿಕ್ಕಳಿಕೆ ಬಂದಿದ್ದ ರೆ, ಕಾಲು ಸ್ಪೂನ್ ತುಳಸಿ ಎಲೆ ರಸಕ್ಕೆ,ಜೇನುತುಪ್ಪ ಕಲಸಿ, ಕುಡಿಸಿ.
3. ಬಾಲಗ್ರಹದ ಭಾದೆ ಗೆ...ತುಳಸಿ ಎಲೆ, ಮತ್ತು ಸಮಾಂಶ ಬಜೆ ಅರೆದು, ಜೇನುತುಪ್ಪದಲ್ಲಿ ಬೆರೆಸಿ ನೆಕ್ಕಿಸಬೇಕು.
4.ಅಳಲೆಕಾಯಿ ಸಿಪ್ಪೆಯ ಪುಡಿ ಒಂದು ಚಿಟಿಕೆ, ಜೇನುತುಪ್ಪದಲ್ಲಿ ಸೇರಿಸಿ, ದಿನಕ್ಕೆ ಎರೆಡು ಬಾರಿ, ನೆಕ್ಕಿಸಿದರೆ, ಎಳೆ ಮಕ್ಕಳ ಬೇಧಿ ಗುಣ ಆಗುವುದು.
5. ಹಿಪ್ಪಲಿಯನ್ನು ಜೇನುತುಪ್ಪದಲ್ಲಿ ತೀಡಿ,ತಾಯಿಯ ಸ್ತನಕ್ಕೆ ಲೇಪಿಸಿ,ಹಾಲು ಕುದಿಸಿದರೆ, ಮಗುವಿನ ಕೆಮ್ಮು ಗುಣ ಆಗುತ್ತೆ.
6. ಒಂದು ವಿಳಿದೇಳೆ, 2ದೊಡ್ಡಪತ್ರೆ ಎಲೆ,4ತುಳಸಿ ಎಲೆ, ಸೇರಿಸಿ, ಒಟ್ಟಿಗೆ ಅರೆದು ರಸ ತೆಗೆದು, ಸ್ವಲ್ಪ ಜೇನತುಪ್ಪ ದೊಡನೆ ಮಗುವಿಗೆ ಕುದಿಸಿ ದರೆ ನೆಗಡಿ ಕಮ್ಮಿ ಆಗುತ್ತೆ.
7. ಮಕ್ಕಳಿಗೆ ಒಂಸತ್ವ (om water) ಆಗಾಗ್ಗೆ ನೀಡುತ್ತಿದ್ದ ರೆ, ಕ್ರಿಮಿ ಭಾದೆ ಬರಲ್ಲ.
8. ಮಕ್ಕಳಿಗೆ ವಾಂತಿ ಇದ್ದರೆ, ಏಲಕ್ಕಿ ಸುಟ್ಟು ಪುಡಿ ಮಾಡಿಕೊಳ್ಳಬೇಕು. ಅದಕ್ಕೆ ಜೇನುತುಪ್ಪ ಸೇರಿಸಿ, ನೆಕ್ಕಿಸಬೇಕು.
9. ಮಕ್ಕಳಿಗೆ ಗುದ ವ್ರಣ ಆದರೆ...ಜೀರಿಗೆಯನ್ನು ಹರಳೆಣ್ಣೆ ಯಲ್ಲಿ ಹುರಿದು, ನಂತ್ರ ಅರೆದು ಲೇಪಿಸಬೇಕು.
10. ಮಕ್ಕಳು ತಾಯಿ ಹಾಲು ಕುಡಿ ಯ ದಿದ್ದರೆ, ಅತಿಮಧುರ ವನ್ನೂ ಹಾಲಲ್ಲಿ ತೀಡಿ, ಹೊಟ್ಟೆಗೆ ಹಚ್ಚಿ.
(VedicRoots youtube channel collections)
Comments
Post a Comment