ದೀಪಾವಳಿಯ ಸಂಪ್ರದಾಯದ ಹಾಡು

https://youtu.be/11epn08GJpA

ದೀಪಾವಳಿಯ ಸಂಪ್ರದಾಯದ ಹಾಡು

ಬೆಳಗುವ ಜ್ಯೋತಿಯ ಪ್ರೀತಿಯಲಿ
ಪಾರ್ವತಿ ಮಾತೆಯ ಎದುರಿನಲಿ |2|
||   ಪ  ||

ಕಾರ್ತಿಕ ಸೋಮವಾರ ಶಿವನ ದಿನ
ಶಿವನ ಅರಸಿಗೆ ಶುಭದ ದಿನ
ಆಸ್ತಿಕರೆಲ್ಲರೂ ಕಾದ ದಿನ
ದೀಪಗಳಿರಿಸುವ ಶುಭದ ದಿನ  |1|

ಸಾಲು ಸಾಲಿನ ದೀಪಗಳು
ಮಿನುಗುತಲಿರುವ ತಾರೆಗಳು
ಪ್ರಜ್ವಲಿಸುತಲಿ ಪ್ರಕಾಶವೀಯಲಿ
ನಂದಾದೀಪದ ರೀತಿಯಲಿ. |2|

ಲಕ್ಷ್ಯದಿ ಇರಿಸುವ ಪ್ರತಿ ಹಣತೆ
ಲಕ್ಷ ಲಕ್ಷ ಗಳ ದಾಟುತಲಿ
ಅಕ್ಷಯವಾಗಲಿ ಅನಂತವಾಗಲಿ
ಅಖಂಡ ಜ್ಯೋತಿಯು ಉರಿಯುತಲಿ 
|3|

Like share subscribe and don't forget to press the bell button 👍😊🙏

Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು