ಶ್ರೀಮದ್ ಭಗವದ್ಗೀತೆಯ, ಮೊದಲನೇ ಅಧ್ಯಾಯವಾದ, ಅರ್ಜುನ ವಿಷಾದ ಯೋಗ, ಹಾಡಿನ ರೂಪದಲ್ಲಿ ನಿಮಗಾಗಿ👍👇👇👇.ರಚನೆ....ಲಕ್ಷ್ಮಿ ಗಂಗರಾಜು

🙏ಓಂ ಶ್ರೀ ಗುರುಭ್ಯೋ ನಮಃ🙏

😊ಶ್ರೀಮದ್ ಭಗವದ್ಗೀತೆಯ, ಮೊದಲನೇ ಅಧ್ಯಾಯವಾದ, ಅರ್ಜುನ ವಿಷಾದ ಯೋಗ, ಹಾಡಿನ ರೂಪದಲ್ಲಿ ನಿಮಗಾಗಿ👍👇👇👇👇

ಶ್ರೀಮದ್ ಭಗವದ್ಗೀತೆಯ ಮೊದಲನೇ ಅಧ್ಯಾಯ.....ಹಾಡಿನ ರೂಪದಲ್ಲಿ(ರಚನೆ....ಲಕ್ಷ್ಮಿ ಗಂಗರಾಜು)

ವಿಶ್ವ ಉದ್ಧಾರಕೆ ಭಗವದ್ಗೀತೆಯ ಭೋದಿಸಲು ತಾ ಶ್ರೀಕೃಷ್ಣ.
ನೆಪದಿ ಮಾತ್ರದೇ ಅರ್ಜುನನಿರಲು ಸಾರವು ಮನುಜ ಕುಲಕೆಂದಾ.
ವ್ಯಾಸವಿರಚಿತ ಅಷ್ಟ ದಶಾಧ್ಯಾಯ ಅದ್ವೈತದ ಅಮೃತ ಶ್ರೀಕೃಷ್ಣ.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ.  || 1 ||

ಯುದ್ಧದಿ ಪಾಂಡವಪುತ್ರರು ಸುತರು ಧರ್ಮನೆಲ ಕುರುಕ್ಷೇತ್ರದಲಿ.
ಏನು ಮಾಡಿದರು ಹೇಳು ಸಂಜಯ ನಿನ್ನಯ ದಿವ್ಯ ದೃಷ್ಟಿಯಲಿ.
ಅಂಧ ದೃತರಾಷ್ಟ್ರನು ಹೀಗೆಂದು ಕೇಳಲು ಸಂಜಯ ಪೇಳಲು ಮುಂದಾದ.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ || 2 ||

ಪಾಂಡವರು ರಚಿಸಿದ ಯುದ್ಧ ವ್ಯೋಹವ ಕಂಡು ದುರ್ಯೋಧನ ದಂಗಾದ.
ದ್ರೋಣರ ಬಳಿಸಾರಿ ವಚನವಾಡುತ ದ್ರುಪದಸುತ ಬುದ್ಧಿಮತ್ತೆ ನೋದೆಂದ.
ಚಿಕ್ಕದಾದರೂ ಚೊಕ್ಕವಾಗಿರುವ ಪ್ರಬಲ ಸೈನ್ಯವ ಕಾಣೆ0ದ.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ ||3 ||

ಭೀಮಾರ್ಜುನರಿಗೆ ಸಮಾನರಾದ ಪ್ರಚಂಡ ಬಿಲ್ಲಲುಗಳಾದ.
ವಿರಾಟ ದ್ರುಪದ ದೃಷ್ವಕೇತು ಚೇಕಿತಾನ ಕಾಶೀ ರಾಜ.
ಪುರುಜಿತ್ ಕುಂತಿಭೋಜ ಶೈಭ್ಯ ಯುಧಾಮನ್ಯು ಉತ್ತಮೌಜಸ್ಸನು.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ || 4 ||

ಸುಭದ್ರೇಸುತನು ವೀರಾಭಿಮನ್ಯುವು ದ್ರೌಪದಿ ಸುತರೈವರು ಇಹರು.
ವೀರ್ಯವಂತರು ನರಪುಂಗವರು ವಿಕ್ರಾಂತರು ಮಹಾರಥರಿವರು.
ಆಚಾರ್ಯರನುದ್ದೇಶಿಸಿ ರಾಜನು ನಮ್ಮ ಸೈನ್ಯದೆಡೆ ನೊಡೆಂದಾ.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ || 5 ||

ಭೀಷ್ಮರು ತಾವು ಕರ್ಣ ವಿಕರ್ಣರು ಕೃಪಾಚಾರ್ಯ ಅಶ್ವತ್ಥಾಮ.
ಭೂರಿಶ್ರವನು ಜಯದ್ರಥನು ಅನೇಕ ರಾಜರು ಬಳಿಯಿಹರು.
ಪ್ರಾಣ ತ್ಯಾಗಕೆ ನಿರ್ಧಾರ ಮಾಡಿಹ ವೀರಾಧಿ ವೀರರು ಯುದ್ದ ನಿಪುಣರು.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ || 6 ||

ಭೀಷ್ಮರ ರಕ್ಷಿತ ನಮ್ಮ ಸೈನ್ಯವು ಭೀಮ ರಕ್ಷಿತ ಸೈನ್ಯಕ್ಕಿಂತ ಕ್ಷೀಣ.
ಎಂದು ಪೇಳಲು ದುರ್ಯೋಧನನು ತನ್ನಯ ಅಳಲು ಹೊರ ಹಾಕಿದನು.
ದೈರ್ಯ ತುಂಬುವ ಉದ್ದೇಶದಲಿ ಭೀಷ್ಮರು ಶಂಖವನೂದಿದರು.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ. || 7 ||

ಶಂಖ ತಮಟೆಗಳು ಭೇರಿ ನಗಾರಿ ದುಂದುಭಿ ಒಮ್ಮೆಲೇ ಮೊಳಗಿದವು.
ಇದರ ನಂತರದಿ ಕೃಷ್ಣ ಪಾಂಡವರು .
ಆ ಭಯಂಕರ ಶಂಖ ನಾದಗಳು ಪ್ರತಿಧ್ವನಿಯನು ಮಾಡುತಿರೆ.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ.  || 8 || 

ಸನ್ನದ್ದನಾಗಿ ದನುರ್ಧಾರಿ ಅರ್ಜುನ ಕೃಷ್ಣನ ಕುರಿತು ಹೀಗೆಂದಾ.
ಎರಡು ಸೇನೆಗಳ ನಡುವೆ ನನ್ನಯ ರಥವನು ನಿಲ್ಲಿಸಬೇಕೆಂದಾ.
ದುರ್ ಬುದ್ದಿ ರಾಜನ ಸಂತೋಷಗೊಳಿಸಲು ಬಂದಿಹ ರಾಜರ ವೀಕ್ಷಿಸಬೇಕೆಂದ.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ.  || 9 ||

ರಥವನು ಹಾಗೇ ನಡೆಸುತ್ತಾ ಕೃಷ್ಣನು ಉಭಯ ಸೈನ್ಯದ ಮಧ್ಯ ನಿಲ್ಲಿಸಲು
ನೆರೆದ ಪಿತೃ ಪಿತಾಮಹಂದಿರ ಪುತ್ರ ಪೌತ್ರ ಸಖ ಬ್ರಾತೃಗಳ.
ಶ್ವಶುರ ಮಾತುಲರ ಕಾಣಲು ಪಾರ್ಥನು ಕರುಣೆ ವಿಷಾದದಿ ಬಸವಳಿದಾ
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ. || 10 || 

ರಣರಂಗದಲಿ ಸ್ವಜನರ ಕೊಲ್ಲುತ ರಾಜ್ಯ ಗೆಲುವು ಸುಖ ಬೇಕಿಲ್ಲ.
ಮೂರು ಲೋಕದ ಪದವಿ ಸಿಕ್ಕರೂ ಕೊಲ್ಲಲಿಚ್ಛಿಸೆನು ಬಂಧುಗಳ
ಪಾಪದ ಗಳಿಕೆ ಕುಲ ಕ್ಷಯಗಳ ಕಾಣುವ ಆಶಯ ಏನಗಿಲ್ಲ.
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ.  ||11 ||

 ಧರ್ಮ ಭ್ರಷ್ಟತೆ ವರ್ಣ ಸಂಕರ ಕುಲಕ್ಷಯಗಳು ಬೇಕಿಲ್ಲ.
ನರಕವಾಸವು ಮಹಾ ಪಾಪಗಳ ಆಚರಿಸೆ ಹೊರಟಿಹೆವಲ್ಲ.
ಹೀಗೆ ನುಡಿಯುತ ಶೋಕದಿ ಅರ್ಜುನ ರಥದಿ ಕುಳಿತ ಶಸ್ತ್ರ ತ್ಯಾಗ ಮಾಡುತ್ತಾ
ಜಯ ಜಯ ಭಗವದ್ಗೀತೆಯ ಸಾರವ ಅರಿಯುವ ಮನುಕುಲವೇ ಧನ್ಯ || 12 ||

🙏ಶ್ರೀ ಕೃಷ್ಣಾರ್ಪಣಾಮಸ್ತು,🙏
Vedic Roots youtube channelನಲ್ಲಿ

https://youtu.be/sIfavJX9Krg

Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು