ನಿಮ್ಮ ಉಗುರಿನ ಬದಲಾವಣೆ ಏನು ಹೇಳುತ್ತದೆ

ಉಗುರಿನ ಮಾಹಿತಿ
 1️⃣ಉಗುರಿನ ಬದಲಾವಣೆ ಅಪಾಯಕಾರಿ ಅಲ್ಲದೆ ಹೋದರು ತಿಳಿದು ಕೊಳ್ಳುವುದು ಒಳ್ಳೆಯದು. ಉಗುರು ಹಲವಾರು ರೀತಿ ಕಂಡುಬಂದರೂ, ಒಮ್ಮೆ ರೋಗಲಕ್ಷಣ ತೋರಿಸುತ್ತದೆ,ಒಮ್ಮೊಮ್ಮೆ ಕಂಡು ಬರದು.
 2️⃣ರೋಗ ನಿರ್ಧಾರ ದಲ್ಲಿ ಉಗುರು ಕೂಡ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಉಗುರು ಪರೀಕ್ಷೆ ಮೂಲಕ ಹಲವಾರು ರೋಗಗಳನ್ನು ಪತ್ತೆ ಹಚ್ಚಬಹುದು.
ಹೃದಯದ ತೊಂದರೆ,ಶ್ವಾಸಕೋಶದ ತೊಂದರೆ ಇದ್ದಾಗ ಉಗುರಿನ ಮೂಲಕ ಕಂಡುಹಿಡಿಯುತ್ತಾರೆ.
3️⃣ಬಿಳಿ ಉಗುರು
ಸುತ್ತ ದಪ್ಪ ಇದ್ದು ಬಿಳಿ ಉಗುರು ಇದ್ದರೆ,ಅದು ಲಿವರ್ ತೊಂದರೆ ಎಂದು ತೋರಿಸುತ್ತದೆ 
5️⃣ಹಳದಿ ಉಗುರು
ಫಂಗಸ್ ಸೋಂಕು ಹರಡಿದ್ದ ರೆ, ಉಗುರು ಹಳದಿ ಇರುತ್ತದೆ. ಸೋಂಕು ಜಾಸ್ತಿ ಆಗುತ್ತಿದ್ದ ರೆ, ಉಗುರು ಬೆಳೆಯುತ್ತಾ ದಪ್ಪ ಆಗಿ, ಒಣಗಿ ಉದುರಿ ಹೋಗುತ್ತದೆ. thyroid ಇದ್ದರೂ ಕೆಲವರಿಗೆ ಉಗುರು ಹಳದಿ ಇರುತ್ತದೆ.
6️⃣ನೀಲಿ ಉಗುರು.
ಕೆಲವು ಬಾರಿ ಅಲ್ಲಲ್ಲಿ ನೀಲಿ ಬಣ್ಣ ಕಾಣಿಸಿದರೆ, ಸರಿಯಾಗಿ  oxygen ಪೂರೈಕೆ ಆಗುತ್ತಿಲ್ಲ ಎಂದು ಅರ್ಥ. ಶ್ವಾಸಕೋಶದ ಸೋಂಕು ಇದ್ದರೂ ಅಥವಾ ನ್ಯೂಮೋನಿಯಾ ಬಂದಿದ್ದರು ಉಗುರು ನೀಲಿ ಬಣ್ಣ ಹೊಂದಿರುತ್ತದೆ 
7️⃣ಮೃದು ಅಥವಾ ಪೇಲವ ಉಗುರು
ಅದು ವಯಸ್ಸು ಆಗುತ್ತಿದೆ ಎಂದು ತೋರಿಸುತ್ತದೆ. ಅಷ್ಟೆ ಅಲ್ಲದೆ, ಇದು ರಕ್ತಹೀನತೆ,ಹೃದಯ ಸಮಸ್ಯೆ, ಮಧುಮೇಹ,ಲಿವರ್ ತೊಂದರೆ,ಅಪೌಷ್ಟಿಕತೆ ಮುಂತಾದ ಸಮಸ್ಯೆ ಕೂಡ ಆಗಿರಬಹುದು.
8️⃣ಉಗುರಿನ ಮೇಲೆ ಅಲ್ಲಲ್ಲಿ ಹಳ್ಳದ ರೀತಿ ಆಗಿದ್ದರೆ ಅದು ಸೋರಿಯಾಸಿಸ್ ರೋಗದ ಪ್ರಾ ರಂಬಿಕ ಹಂತ ಇರಬಹುದು. ಅಥವಾ artharitis ಇರಬಹುದು.
9️⃣ಉಗುರಿನ ಸುತ್ತ ಕೆಂಪಾಗಿ ಇದ್ದು ಊತ ಇದ್ದರೆ ಕೂಡ ಉಗುರಿನ ಸೋಂಕು ಎನ್ನುತ್ತಾರೆ.
,🔟ಉಗುರಿನ ಕೆಳಗೆ ದಟ್ಟವಾದ ಗೆರೆ ಇದ್ದರೆ, ಅದು ಮೆಲನೋಮ ಎಂಬ ರೋಗದ ಲಕ್ಷಣ ಇರಬಹುದು.
👎👎ಉಗುರು ಕಚ್ಚುವುದು ಒಂದು ಕೆಟ್ಟ ಅಭ್ಯಾಸ, ಇದು ಗೀಳು ಬೇನೆ ಅಥವಾ ಕಾತರತೆ ಜಾಸ್ತಿ ಎಂದು ತೋರಿಸುತ್ತದೆ.

Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು