ಮಹಿಳೆ
ಸ್ತ್ರೀ ಅಥವಾ ಮಹಿಳೆ ಆದಿಯಿಂದಲೂ ಸೃಷ್ಟಿಯ ಮೂಲ ಆಗಿದ್ದಾಳೆ. ಮಹಿಳೆಯು ವಿಶಿಷ್ಟ ಶಕ್ತಿಗಳ ಸಂಗಮ.ಮಮತೆ,ಕರುಣೆ, ವಾತ್ಸಲ್ಯ,ಅಕ್ಕರೆ,ಭೂಮಿ ತೂಕದ ತಾಳ್ಮೆ ಇವಿಷ್ಟೂ ಮಹಿಳೆ ಹೊಂದಿದ್ದಾಳೆ.ನಮ್ಮ ಭಾರತೀಯ ಸಂಸ್ಕೃತಿ ಯಲ್ಲಿ ಮಹಿಳೆಗೆ ಅವಳದೇ ಆದ ಗೌರವ ಸ್ಥಾನಮಾನಗಳು ಇವೆ. ಪುರಾಣ ಕಾಲದ ಆದಿಶಕ್ತಿ, ವೇದಕಾಲದ ಗಾರ್ಗಿ, ಮೈತ್ರೇಯಿಯರು, ರಾಮಾಯಣ,ಮಹಾಭಾರತಕ್ಕೆ ಕಾರಣರಾದ ಸೀತಾ, ದ್ರೌಪದಿಯರು,ಋಷಿ ಪತ್ನಿಯ ರಾ ದ ಲೋಪ ಮುದ್ರಾ,ಅಪಾಲ ಬ್ರಹ್ಮ ವಾದಿ ನಿ ಯರು ಪೂಜನೀಯ ರಾಗಿದ್ದಾರೆ.
ಒಂದು ಜೀವವನ್ನು ತನ್ನಲ್ಲಿ ಅಡಗಿಸಿ,ಕಾಪಾಡಿ, ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ. ಕೌಟುಂಬಿಕ ನಿರ್ವಹಣೆ, ಸಂಸ್ಕೃತಿ, ಸಂಸ್ಕಾರ, ಆರೈಕೆ ಯ ಜವಾಬ್ದಾರಿ ಹೇಗೆ ಎಲ್ಲೆಲ್ಲೂ ಎಲ್ಲ ಕಡೆಯಲ್ಲೂ ಕಾಣಿಸುತ್ತಾ,ಮಹಿಳೆ ಭೂಮಿಯಾಗಿ,ಆಕಾಶ ಆಗಿ,ಮೇರು ಪರ್ವತ ಆಗಿ ಬೆಳೆದಿದ್ದಾಳೆ.ಅದಕ್ಕಾಗಿ ಮಹಿಳೆಯನ್ನು ಸೃಷ್ಟಿಯ ಸಂಕೇತ ಎನ್ನುವರು.
ಭಾರತೀಯ ಪರಂಪರೆಯಲ್ಲಿ ಮಹಿಳೆ ಮಗಳು,ಮನದನ್ನೆಮತ್ತು ಮಾತೆ ಯಾಗಿ ಪೂಜನೀಯ ಸ್ಥಾನವಿದೆ. ಅಷ್ಟೇ ಅಲ್ಲದೆ ಅಧರ್ಮ ನಡೆದಾಗ ಹೋರಾಡುವ ಅನಂತ ಶಕ್ತಿ ಉಳ್ಳ ವಳು. ದುಷ್ಟರನ್ನು ಶಿಕ್ಷಿಸಿದ ಚಾಮುಂಡಿ, ದ್ರೌಪದಿ,ದಮಯಂತಿಯಂತ ದಿಟ್ಟ ನಾರಿಯರು,ದೇಶ ರಕ್ಷಣೆಗೆ ಮುಂದಾದ ಝಾನ್ಸಿರಾಣಿ, ಚೆನ್ನಮ್ಮ, ಸತಿಯಾಗಿ ಚಿತೆಗೇ ರಿದ ವೀರವನಿತೆ ರಾಣಿಪದ್ಮಿನಿ ಇವರ ಧೈರ್ಯ, ಸಾಹಸಗಳು ಅಜರಾಮರವಾಗಿ ಇದೆ.
ಹೀಗೆ ಅಂದಿನಿಂದ ಇಂದಿನವರೆಗೆ ವಿವಿಧ ರೀತಿ ಯಲ್ಲಿ,ಮಹಿಳೆಯು ಅಧ್ಯಾತ್ಮಿಕ ಮತ್ತು ಪ್ರಾಪಂಚಿಕ ರಂಗಗಳಲ್ಲಿ,ಅರಳಿ ಬೆಳೆದವಳು.
ಮಹಿಳೆಯು ಒಂದು ಮನೆತನದ ಅನಭಿಷಿಕ್ತ ಮಹಾರಾಣಿ ಎಂದರೆ ತಪ್ಪಾಗಲಾರದು.ಉತ್ತಮ ಮಹಿಳೆಯಿಂದ ಉತ್ತಮವಾದ ಪೀಳಿಗೆ ಹುಟ್ಟಲು ಸಾಧ್ಯ. ಭಾರತೀಯ ಮಹಿಳೆಗೆ ವ್ರತ,ಪೂಜೆ,ಸಂಯಮ ಗಳ ಮೂಲಕ ತನ್ನ ದೇಹ,ಮನಸ್ಸು, ಭಾವ,ವಿಚಾರಗಳನ್ನು ಪವಿತ್ರವಾಗಿ ಇರಿಸಿಕೊಂಡು ಉತ್ತಮ ಸಂಸ್ಕಾರ ಸಂಪನ್ನ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇದೆ.ಮಹಿಳೆ ಹೆಚ್ಚಿನ ಸಹನೆ, ತಾಳ್ಮೆ,ಸಂವೇದನಾ ಗುಣ ಹೊಂದಿದ್ದಾಳೆ.
ಮನೆಯಲ್ಲಿ ಮಾತ್ರ ಅಲ್ಲದೆ ಇಂದು ಹೊರ ಜಗತ್ತಿನ ಅರಿವು ಕೂಡ ಚನ್ನಾಗಿದೆ. ಸಂಸಾರ, ವೃತ್ತಿ ಎರಡನ್ನೂ ನಿಭಾಯಿಸಬಲ್ಲ ಜಾಣ್ಮೆ ಇದೆ.ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುವ ಕಾಲ ಕಣ್ಮರೆ ಆಗಿ, ಪುರುಷರಷ್ಟೇ ಧೀಮಂತಿಕೆ ಯಿಂದ ಬದುಕುವ ಶಕ್ತಿ ಇದೆ.ಆಕೆ ತಾಯಿ,ತಂಗಿ,ಅಕ್ಕ,ಅತ್ತಿಗೆ, ನಾದಿನಿ,ಅತ್ತೆ,ಗೆಳತಿ,ಪ್ರೇಮಿ ಇತ್ಯಾದಿ ನಿರ್ವಹಿಸುವ ಪಾತ್ರಗಳು ಅದ್ಬುತ.
ಭಾರತೀಯ ಸಂಸ್ಕೃತಿಯ ರಾಯಭಾರಿ ಯಂತಿರುವ ಮಹಿಳೆ ತನ್ನ ಕುಟುಂಬಕ್ಕಾಗಿ ಏನಾದರೂ ತ್ಯಾಗ ಮಾಡಲು ಸಿದ್ದ ಆಗಿರುತ್ತಾಳೆ. ತನ್ನ ಆತ್ಮೋದ್ದಾರಕ್ಕೆ ಪರಿವಾರ ಮತ್ತು ಸಮಾಜದ ಹಿತಕ್ಕೆ ದುಡಿದು ಆದರ್ಶ ಪ್ರಾಯ ಆಗಿದ್ದಾಳೆ.ಹಿರಿಯರು ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ನೆಲೆಸಿರುವ ರು ಎಂದು ಹೇಳುತ್ತಾರೆ.
Comments
Post a Comment