ಸೌಂದರ್ಯ ಸಲಹೆಗಳು

Some tips 👍😊😊

1. ಮೊದಲಿಗೆ 15 ದಿನಕ್ಕೊಮ್ಮೆ ಉಪವಾಸ ಮಾಡುವುದರಿಂದ, ಚರ್ಮದ ಸೌಂದರ್ಯ ಹೆಚ್ಚುವುದು.
2. ಸೌತೆಕಾಯಿ ಸಿಪ್ಪೆ 1 ದೊಡ್ಡ ಕಪ್ ಮತ್ತು ನಿಂಬೆಸಿಪ್ಪೆ ಎರೆಡು. ಚೆನ್ನಾಗಿ ಒಣಗಿಸಿ ಪುಡಿಮಾಡಿ facepack ರೀತಿ ಹಚ್ಚಿದರೆ ಮುಖದ ಕಲೆ ನಿವಾರಣೆ ಆಗಿ, ಮುಖ ಕಾಂತಿಯುತ ಆಗುತ್ತದೆ.
3. ಕೈಕಾಲು ಎಲ್ಲಾದರೂ ಸ್ಕಿನ್ ಪ್ರಾಬ್ಲಮ್ ಇದ್ದರೆ ರಾತ್ರಿ ಆ ಜಾಗದಲ್ಲಿ ಬಾಳೆಹಣ್ಣಿನ ಸಿಪ್ಪೆ ಇಟ್ಟು,ಬಟ್ಟೆ ಸುತ್ತಿ, ಬೆಳಿಗ್ಗೆ ತೆಗೆದರೆ ಕ್ರಮೇಣ ಕಮ್ಮಿ ಆಗುತ್ತೆ. ರಫ್ ಸ್ಕಿನ್, ಅಥವಾ ಸೋರಿಯಾಸಿಸ್ ಗೆ 4-7  ದಿನ ಮಾಡಬೇಕು.
4. ಬೇಸಿಗೆಗೆ ಬೆವರು ಜಾಸ್ತಿ ಆಗುತ್ತಿದ್ದ ರೆ, ಕಿತ್ತಳೆ, ನಿಂಬೆ ಸಿಪ್ಪೆ ಹಾಕಿ, ಸ್ನಾನ ಮಾಡಿದರೆ ಬೆವರು ಕಮ್ಮಿ ಆಗುತ್ತೆ.
5. ಸೌತೆಸಿಪ್ಪೆ ಪೇಸ್ಟ್ ಮಾಡಿ, ಮಸೂರ್ ದಾಲ್ ಪೌಡರ್, ಎರಡನ್ನೂ ಮೊಸರಿನ ಜೊತೆ ಬೆರೆಸಿ, ಕಂಕುಳು ಕುತ್ತಿಗೆ ಸುತ್ತ ಇರುವ ಕಪ್ಪುಕಳೆಗೆ ಹಚ್ಚಿದರೆ, ಕ್ರಮೇಣ ಕಮ್ಮಿ ಆಗುತ್ತೆ.
6.ಪ್ರತಿದಿನ ಹತ್ತು ನಿಮಿಷ ವರುಣ ಮುದ್ರೆ ಮಾಡಿದರೆ, ಸ್ಕಿನ್ ಪ್ರಾಬ್ಲಮ್,ಚರ್ಮ ಸುಕ್ಕು, ಮೊಡವೆ ಕಮ್ಮಿ ಆಗುತ್ತೆ.
7. ಒಣ ದ್ರಾಕ್ಷಿ ರಾತ್ರಿ ನೀರಲ್ಲಿ ಹಾಕಿಟ್ಟು ಮರುದಿನ ಚೆನ್ನಾಗಿ ಹಿಚುಕಿ ರಸ ಮಾಡಿ 20-40 days (ಅವರವರ ತೊಂದರೆಗೆ ಅನುಗುಣವಾಗಿ)ಕುಡಿದರೆ  ಸ್ಕಿನ್ ಪ್ರಾಬ್ಲಮ್ ನಿವಾರಣೆ ಆಗುತ್ತೆ.
8. ಬಹಳ ಉಷ್ಣ ಇದ್ದರೆ ತಂಪು ಮಾಡಿಕೊಳ್ಳಿ.ನಿಮ್ಮ ನಾಲಿಗೆ ಮೇಲೆ ಹಳದಿ ಬಣ್ಣದ greasy coating, ಅಥವಾ ಕೆಂಪಾಗಿ ಇದ್ದರೆ ಹೀಟ್ ಆಗಿದೆ ಅಂತ ಅರ್ಥ.
9. ನಿಮ್ಮ ಕೈ ಕಾಲಿನ ಉಗುರುಗಳು, crack ಆಗುತ್ತಿದ್ದ ರೆ ನಿಮಗೆ ಸ್ಕಿನ್ ಪ್ರಾಬ್ಲಮ್ ಇದೆ ಅಥವಾ ಬರುತ್ತದೆ ಎಂದು ಸೂಚಿಸುತ್ತದೆ 
10. ನಿಂಬೆ ಸಿಪ್ಪೆ ಇಂದ ಪಾದ,ಹಿಮ್ಮಡಿ, massage ಮಾಡಿಕೊಳ್ಳಿ.ಇದರಿಂದ ಬಿರುಕು ಕಮ್ಮಿ ಆಗುತ್ತೆ.
11. ನಿಂಬೆ ಜ್ಯೂಸ್, ಕಲ್ಲಂಗಡಿ ಜ್ಯೂಸ್, ಕುಡಿಯುತ್ತಿದ್ದರೆ  ಚರ್ಮದ ಸಮಸ್ಯೆ ಕ್ರಮೇಣ ಹೋಗುವುದು.
12. ಚರ್ಮದ ಸಮಸ್ಯೆ ಇರುವವರು ಸುವರ್ಣಗಡ್ದೆ ಉಪಯೋಗ ಮಾಡಬಾರದು
13. ಹಾಲಿನಲ್ಲಿ ಬಟಾಣಿ ಪೌಡರ್ mix ಮಾಡಿ, ಹಚ್ಚಿ, ತೊಳೆಯುತ್ತಿದ್ದ ರೆ, ಕ್ರಮೇಣ ಕಲೆಗಳು ಕಮ್ಮಿ ಆಗುತ್ತೆ
14. ಕ್ಯಾರಟ್ ಜ್ಯೂಸ್ ಕುಡಿದರೆ, ಚರ್ಮ ಸುಕ್ಕು ಆಗುವುದು ತಡೆ ಯುತ್ತೆ.
15.ಅಂಗೈ ಬೆವರು ತ್ತಿದ್ದರೆ, ಬದನೆಕಾಯಿ ಹೋಳು ಹಾಕಿದ ನೀರಲ್ಲಿ ಕೈ ತೊಳೆದರೆ, ಕಮ್ಮಿ ಆಗುತ್ತೆ.
16. ಕಡಲೆಹಿಟ್ಟು ಮತ್ತು ಒಣಗಿದ ಬೆಂಡೆ ಕಾಯಿ ಪೌಡರ್ ಬೆರೆಸಿ,ಹಚ್ಚಿ ಸ್ನಾನ ಮಾಡಿದರೆ ಚರ್ಮ ಮೃದು ಆಗುವುದು.
17. ಮೆಂತ್ಯೆ ಹಿಟ್ಟಿನಿಂದ ಮೈಗೇ ತಿಕ್ಕಿ ಸ್ನಾನ ಮಾಡಿದರೆ, ಚರ್ಮದ ಸುಕ್ಕು ಕಮ್ಮಿ ಆಗುತ್ತೆ.
18. ಸಣ್ಣ ಗುಳ್ಳೆ ಚರ್ಮದ ಮೇಲೆ ಕಾಣಿಸಿದರೆ, ಮೆಂತೆಸೊಪ್ಪು ಅರೆದು ಹಚ್ಚಿ
19. ಮೆಂತೆಸೋಪ್ಪು ಕೊಬ್ಬರಿ ಹಾಲಲ್ಲಿ ಅರೆದು, ರಾತ್ರಿ ಮುಖಕ್ಕೆ ಹಚ್ಚಿ, ಸ್ವಲ್ಪ ಹೊತ್ತಿನ ನಂತರ ಬೆಚ್ಚಿನ ನೀರಲಿ ತೊಳೆದರೆ, ಕಲೆ,ಸುಕ್ಕು, ಹೋಗಿ ಹೊಸ ಹೊಳಪು ಬರುವುದು.
20. ಕರಿಬೇವಿನ ಸೊಪ್ಪು ಅರೆದು ನಿಂಬೆರಸ ಸ್ವಲ್ಪ, ಅರಿಶಿನ ಸ್ವಲ್ಪ ಹಾಕಿ ಕಲಸಿ ಮುಖಕ್ಕೆ ಲೇಪಿಸಿದರೆ ಮೊಡವೆ ಕಮ್ಮಿ ಆಗುತ್ತೆ
21.ಅರಿಶಿನ ಮತ್ತು ಅರಿವೆಸೊಪ್ಪು ಅರೆದು ಕೈಕಾಲಿ ಗೆ ಹಚ್ಚಿದರೆ ಕ್ರಮದ ಕಾಂತಿ ಹೆಚ್ಚುತ್ತೆ 

Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು