ಅಡುಗೆ ಸಲಹೆಗಳು, ಕಿವಿಮಾತು

ಆಹಾರ ಪದಾರ್ಥಗಳ ಬಳಕೆ

1. ರೆಡಿ ಚಟ್ನಿ ಪೌಡರ್
 ಒಂದು ಪಾವು....ಹುರಿಗಡಲೆ, 5=6 ಹಸಿ ಮೆಣಸಿನಕಾಯಿ,(ಅಥವಾ ನಿಮ್ಮ ರುಚಿಗೆ ತಕ್ಕಂತೆ), ಉಪ್ಪು ರುಚಿಗೆ ತಕ್ಕಂತೆ,ಒಣಗಿಸಿದ ಕೊತ್ತಂಬರಿ ಸೊಪ್ಪು,ಪುದೀನಾ, ಇವೆಲ್ಲ ಐಟಮ್ ಮಿಕ್ಸಿ ಗೆ ತರಿತರಿಯಾಗಿ, ಹಾಕಿ, ಬಾಕ್ಸನಲ್ಲಿ ಹಾಕಿ ಇಟ್ಟುಕೊಳ್ಳಿ. ಬೇಕಾದಾಗ ಈ ಪೌಡರ್ ಗೆ ಸ್ವಲ್ಪ ಒಗ್ಗರಣೆ,ಕರಿಬೇವು,ಸ್ವಲ್ಪ ನೀರು ಅಥವಾ ಮೊಸರು ಹಾಕಿ ಕಲಸಿ, ದೋಸೆ,ಚಪಾತಿ,ರೊಟ್ಟಿ,ಇಡ್ಲಿ ಮುಂತಾದ ತಿಂಡಿಗಳಿಗೆ ತಿನ್ನಬಹುದು 

2.ಬೆಂಡೆಕಾಯಿ ಅಂಟು ಹೋಗಲು ಹುರಿಯುವ ಬದಲು, ಹುಣಸೆ ರಸದಲ್ಲಿ ಬೇಯಿಸಿ,ನಂತರ ಬಸಿದು ಸಾರಿಗೆ ಸೇರಿಸಿದರೆ ಅಂಟು ಇರದು. 

3. ಸಾರು ಮಾಡಲು, ಕೊಬ್ಬರಿ ಇಲ್ಲದ ಸಮಯದಲ್ಲಿ   ಒಂದು ಸ್ಪೂನ್ ಕಡಲೆಹಿಟ್ಟು ನೀರಲ್ಲಿ ಕಲ್ಸಿ ಸಾರಿಗೆ ಹಾಕಿ ಕುದಿಸಿದರೆ ಸಾರು ಗಟ್ಟಿ ಬರುವುದು

4.ಸಾಸಿವೆ ಒಗ್ಗರಣೆ ಎಣ್ಣೆ ಹಾಕಿ ಫ್ರೈ ಮಾಡುವ ಬದಲು, ಸಣ್ಣ ಉರಿಯಲ್ಲಿ ಎಣ್ಣೆ ಹಾಕದೆ ಚಿಟ್ ಅನ್ನುವವರೆಗೂ, ಫ್ರೈ ಮಾಡಿ ಅದಕ್ಕೆ, ಕರಿಬೇವು ಸೇರಿಸಿ. ಆರಿದ ನಂತರ, ಬಾಕ್ಸ್ ಗೆ ಹಾಕಿ ಇಟ್ಟುಕೊಳ್ಳಿ, ಬೇಕಾದಾಗ ಉಪಯೋಗಿಸಬಹುದು.

Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು