gangamrutha Get link Facebook X Pinterest Email Other Apps February 21, 2022 @Vedic Roots ನೀರು ಎಂದರೆ ಗಂಗೆ. ಇಂತಹ ನೀರಿಗೆ, ಯಾವ ಯಾವ ವಸ್ತು ಬೆರೆಸಿ, ಔಷಧಿಯಾಗಿ ಬಳಸಬಹುದು ಎಂಬ ಮಾಹಿತಿhttps://youtu.be/bZJ_nrv75m8 Get link Facebook X Pinterest Email Other Apps Comments
chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು March 24, 2023 ಶ್ರೀ ಚೈತ್ರಗೌರೀ ವ್ರತದ ಸಂಪ್ರದಾಯದ ಹಾಡು ಕೋಲು ಕೋಲೆನ್ನ ಕೋಲೆ, ಕೋಲು ಕೋಲೆನ್ನ ಕೋಲೆ | ಕೋಲು ಶ್ರೀ ಲಕ್ಷ್ಮೀ ವೆಂಕಟನ್ನ ಬಲಗೊಂಬೆ || ಕೋಲೆ || ಪ || ಚೈತ್ರ ಶುದ್ಧ ತ್ರಿತಿಯಾದಿ ಮಿತ್ರೆ ಗೌರಿಯು ತನ್ನ | ಅರ್ಥಿಯ ತೌರೂರಿಗೆಂದು ಬರುತಾಳೆ || ಕೋಲೆ || ಅರ್ಥಿಯ ತೌರೂರಿಗೆಂದು ಮುತ್ತಿನ ಅಂದಣವನೇರಿ | ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಎತ್ತಿಕೊಂಡು || ಕೋಲೆ || ೧ || ಪುತ್ರ ಗಣಪ ಸ್ಕಂದರನ್ನು ಎತ್ತಿಕೊಂಡು ಬರುವಾಗ| ಛತ್ರ ಚಾಮರವ ಪಿಡಿದು ಸೇವಕರು || ಕೋಲೆ || ಛತ್ರ ಚಾಮರವ ಪಿಡಿದು ಭಕ್ತಿಯಿಂದ ಸೇವಕರು | ಮತ್ತೆ ಬಹು ಪರಾಕವನು ಹೇಳುವರು || ಕೋಲೆ || || ೨ || ವರುಷ ಪ್ರಾರಂಭದಲ್ಲಿ ಗಿರಿಜೆಯನು ಪೂಜಿಸಲು | ಸರಸದ ಉಯ್ಯಾಲೆಯಲಿ | ಗೌರಿಯನಿಟ್ಟು || ಕೋಲೆ || ಗಿರಿಯ ಮೇಲೆ ಗೌರಿಯನಿಟ್ಟು | ವರ ಧಾನ್ಯದಪೈರುಬೆಳೆಸಿ | ಅರಿಷಿಣದೋಕುಳಿ ತುಂಬಿ ಕಳಶವಿಡು || ಕೋಲೆ || || ೩ || ಮುದದಿ ಕಳಶ ಕನ್ನಡಿಯ ಪದುಮ ನಯನೆಯರೆಲ್ಲ ಪಿಡಿದು | ಎದುರುಗೊಂಡು ಗೌರಮ್ಮಗೆ ಕದಲಾರುತಿಯ || ಕೋಲೆ || ಎದುರುಗೊಂಡು ಗೌರಮ್ಮಗೆ ಕದಲಾರುತಿ ಎತ್ತುವಾಗ| ಸುದತಿ ಗೌರಮ್ಮ ನಗುತಾಳೆ || ಕೋಲೆ || || ೪ || ಸಿರಿ ವಸಂತ ಕಾಲವಿದು | ಅರಳು ಮಲ್ಲಿಗೆ ವನದಿ | ಹರದಿ ಗೌರಮ್ಮಗೆ ಅರಮನೆಯು || ಕೋಲೆ || ಅರಮನೆಯ ಸುತ್ತುಮುತ್ತು | ಹರಿವ ತಿಳಿ ನೀರ ಝರಿ | ಮರಿ ಪಕ್ಷಿ ಸ್ವರವ ಕೇಳು || ಕೋಲೆ || || ೫ || ಮಲ್ಲಿಗೆ ತೈಲವ ತಂದು | ನಲ್ಲೆ ಗೌರಿಗೆ ಹಚ್ಚಿ | ಸಲ್ಲಲ... Read more
Comments
Post a Comment