ಗಣಪನ ಹಾಡುಗಳ ಸಂಗ್ರಹ

1. ಗಣೇಶನ ಹಬ್ಬದ ಹಾಡು

ಹಬ್ಬ ಬಂದಿತಮ್ಮ.ಗಣಪನ ಹಬ್ಬ ಬಂದಿತಮ್ಮ. ತೋರಣ ಕಟ್ಟಮ್ಮ.ಮಾವಿನ ತೋರಣ ಕಟ್ಟಮ್ಮ.ಶ್ರದ್ಧೆಯಿಂದ ಭಜಿಸೆ ಬಹುನಿತ್ಯ ಕೊಡುವನಮ್ಮ. ll ಪ ll
ವಾರ ಬರುವನಮ್ಮ.ಶುಭಕಾಲ ಕಾಣಿರಮ್ಮ.ಭಾದ್ರಪದದಿ ವಿಜ್ಞೆ ಶ ಬಂದು,ಭವ ಬಂಧ ಕಳೆವನಮ್ಮ
ll 1 ll
ಕದವ ತೆಗೆಯಿರಮ್ಮ.ಭಕ್ತಿಲಿ ಕಡುಬು ಮಾಡಿರಮ್ಮ.ಪೂಜೆ ಮಾಡಿ ಮಣಿದಾಗ ಬಂದು ಮನ ಶಾಂತಿ ಕೊಡುವನಮ್ಮ
 ll 2 ll
ಬಂದು ಕುಳಿತನಮ್ಮ.ಗೌರಿಯ ಕರೆಯಬಂದನಮ್ಮ. ಗಣಪನಿದ್ದೆಡೆ ಅಜ ವಿಠ್ಠಲನಿದ್ದು ನಿಜ ಮುಕ್ತಿ ಕೊಡುವನಮ್ಮ
ll 3 ll




Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು