Vasavidevi quiz /ವಾಸವಿ ಜೀವನ ಚರಿತ್ರೆಯ ರಸಪ್ರಶ್ನೆಗಳ ಸಂಗ್ರಹಗಳು
1. ಪೂರ್ವದಲ್ಲಿ ಅರ್ಯ ವೈಶ್ಯರ ಒಟ್ಟು ಗೋತ್ರ ಎಷ್ಟು?
2. ವಾಸವಿದೇವಿಯ ಜೊತೆ ಎಷ್ಟು ಗೋತ್ರದವರು ಅಗ್ನಿಪ್ರವೇಶ ಮಾಡಿದರು?
3. ವಾಸವಿ ದೇವಿಯ ಇಷ್ಟ ದೈವ ಯಾವುದು
4. ವಾಸವಿ ದೇವಿಯ ಸೋದರಮಾವನ ಗೋತ್ರ ಯಾವುದು
5. ವಾಸವಿ ದೇವಿಯ ಸಹೋದರನ ಹೆಸರೇನು
6. ಕುಸುಮಾ0ಬ ಕುಸುಮಶ್ರೇಷ್ಠಿ ಯರ ಹಿಂದಿನ ಹೆಸರೇನು
ಉತ್ತರ....ಕಾವೇರಿ..ವಾಸವ
7.ಶ್ರೀ ವಾಸವಿದೇವಿಯು ಯಾರ ಅವತಾರ
ಪಾರ್ವತಿದೇವಿಯ ಅವತಾರ
8. ವಾಸವಿಯ ಗುರುಗಳ ಹೆಸರೇನು
ಭಾಸ್ಕರಾಚಾರ್ಯರು
9. ಕುಸುಮಶ್ರೇಷ್ಠಿಯ ತಂದೆಯ ಹೆಸರೇನು
ಕಲ್ಹಾರ (ಪೆಂಡ್ಲಿಕುಲಗೋತ್ರ)
10.ಕುಸುಮಾ0ಬೆಯ ತಂದೆಯ ಹೆಸರೇನು
ಮಣಿಕುಂಡಲ( ಮೈತ್ರೆಯಸ ಗೋತ್ರ)
11.ಕುಸುಮಂಬೆ ಕುಸುಮಶ್ರೇಷ್ಠಿ ದಂಪತಿಯರು ಯಾವ ಯಾಗ ಆಚರಿಸಿ ಮಕ್ಕಳನ್ನು ಪಡೆದರು
ಪುತ್ರಕಾಮೇಷ್ಠಿ ಯಾಗ
12.ವಿರೂಪಾಕ್ಷ ನ ಪತ್ನಿ ಯಾರು
ರತ್ನಾವತಿ
13.ವಿಷ್ಣುವರ್ಧನನ ವಂಶ ಯಾವುದು
ಚಂದ್ರ ವಂಶ
14. ಪೆನುಗೊಂಡೆಯಲ್ಲಿ ಇದ್ದ ಶಿವನ ಹೆಸರೇನು
ನಗರೇಶ್ವರ
15. ಕುಸುಮ ಶ್ರೇಷ್ಠಿಯು ಎಷ್ಟು ಪಟ್ಟಣಗಳಿಗೆ ರಾಜ ಆಗಿದ್ದನು
ಹದಿನೆಂಟು
16. ಪೆನುಗೊಂಡೆ ಎಲ್ಲಿದೆ
ಆಂದ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಣುಕು ತಾಲೂಕಿನಲ್ಲಿದೆ.
17. ಒಟ್ಟು ಎಷ್ಟು ಮಂದಿ ಅಗ್ನಿಪ್ರವೇಶ ಮಾಡಿದರು
ಒಟ್ಟು 205 ಮಂದಿ. ವಾಸವಿ ಮತ್ತು 102 ದಂಪತಿಗಳು
18. ವಿಷ್ಣುವರ್ಧನನು ವಾಸವಿಯನ್ನು ಮೊದಲು ಎಲ್ಲಿ ನೋಡಿದನು
ನಗರೇಶ್ವರನ ದೇವಾಲಯದಲ್ಲಿ
19. ವಿಷ್ಣುವರ್ಧನನ ಹಿಂದಿನ ಜನ್ಮದ ಹೆಸರೇನು
ಚಿತ್ರಕಂಠ
20.ಅಗ್ನಿ ಪ್ರವೇಶಕ್ಕೆ ಮುನ್ನ ವಾಸವಿಯು ಯಾವ ರೂಪ ತೋರಿದಳು
ವಿಶ್ವರೂಪದರ್ಶನವನ್ನು ತೋರಿದಳು
21. ಆರ್ಯ ವೈಶ್ಯರ ಕಾಶಿ ಎಂದು ಯಾವ ಊರನ್ನು ಕರೆಯುತ್ತಾರೆ. ?
ಪೆನುಗೊಂಡ
22. ವಿರೂಪಾಕ್ಷನ ಪತ್ನಿ ರತ್ನಾವತಿ ಯಾರ ಮಗಳು ?
ಎಲೂರು ಪಟ್ಟಣದ ಆರಿಧಿ ಶ್ರೇಷ್ಟಿಯ ಮಗಳು.
23. ಅಗ್ನಿಪ್ರವೇಶಕ್ಕೆ ಎಷ್ಟು ಅಗ್ನಿಗುಂಡಗಳು ತಯಾರಾದವು ?
103
24. ಕುಸುಮ ಶ್ರೇಷ್ಠಿಯ ಪತ್ನಿಯ ಹೆಸರೇನು ?
ಕುಸುಮಾ0ಬೆ
25. ಅಗ್ನಿ ಪ್ರವೇಶ ಮಾಡಿದ 102 ದಂಪತಿಗಳಲ್ಲಿ ಯಾವ ಗೋತ್ರದವರಿಗೆ ಮಕ್ಕಳು ಇರಲಿಲ್ಲ. ?
ಲಾಭಾಲ ಗೋತ್ರದವರು.
26. ಕುಸುಮ ಶ್ರೇಷ್ಠಿಯ ಕುಲ ಗುರುಗಳು ಯಾರು ?
ಭಾಸ್ಕರಚಾರ್ಯರು
27. ಪುತ್ರ ಕಾಮೇಷ್ಠಿ ಯಾಗದ ಫಲವಾಗಿ ಕುಸುಮ ದಂಪತಿಗಳಿಗೆ ಎಂತಹ ಮಕ್ಕಳು ಜನಿಸಿದರು ?
ಅವಳಿ ಮಕ್ಕಳು
28. ದಂಡ ಯಾತ್ರೆ ಮಾಡುತ್ತಾ ಪೆನುಗೊಂಡೆಗೆ ಯಾರು ಬಂದರು ?
ವಿಷ್ಣು ವರ್ಧನ ರಾಜ
29. ಪೆನುಗೊಂಡೆ ಯಾವ ನದಿ
ತೀರದಲ್ಲಿದೆ. ?
ಗೋದಾವರಿ
30. ಅಗ್ನಿ ಪ್ರವೇಶದ ನಂತರ ವಾಸವಿ ದೇವಸ್ಥಾನವನ್ನು ಕಟ್ಟಿಸಿದವರು ಯಾರು ?
ವಿರೂಪಾಕ್ಷ ಮತ್ತು ರಾಜ ರಾಜೇಂದ್ರ
31. ಕುಸುಮ ಶ್ರೇಷ್ಠಿ ದಂಪತಿಗಳಿಗೆ ಯಾವ ಕೊರಗು ಇತ್ತು ?
ಮಕ್ಕಳು ಇಲ್ಲ ಎಂಬ ಕೊರಗು
32. ವಿಶ್ವ ರೂಪ ತೋರಿದ ವಾಸವಿ ಹೇಳಿದ ಮೂಲಮಂತ್ರ ಪದಗಳು ಯಾವುವು ?
ಅಹಿಂಸೆ,ತ್ಯಾಗ, ಬಲಿದಾನ
33. ವಿಷ್ಣುವರ್ಧನನ ಮಗನ ಹೆಸರೇನು ?
ರಾಜೇಂದ್ರ
34. ವೈಶ್ಯ ರಾಜ್ಯವು ಯಾವ ಚಕ್ರವರ್ತಿಗಳಿಗೆ ಸಾಮಂತ ರಾಜ್ಯ ಆಗಿತ್ತು ?
ಆಂಧ್ರಪ್ರದೇಶದ ರಾಜ ಮಹೇಂದ್ರಿ ಚಕ್ರವರ್ತಿಗಳಿಗೆ.
35. ಅಗ್ನಿ ಪ್ರವೇಶ ಮಾಡಲು ನಿರಾಕರಿಸಿದವರು ಎಷ್ಟು ಮಂದಿ?
614 ಗೋತ್ರದವರು.
36. ಕುಸುಮಾಂಬೆಯ ಪತಿ ಯಾರು ?
ಕುಸುಮ ಶ್ರೇಷ್ಠಿ
37.ವಾಸವಿ ಅಗ್ನಿ ಪ್ರವೇಶ ಯಾವ ದಿನ ನಡೆಯಿತು ?
ಮಾಘ ಶುದ್ಧ ಬಿದಿಗೆ ದಿನ.
38. ವಾಸವಿಯ ಗೋತ್ರ ಯಾವುದು ?
ಪೆಂಡ್ಲಿ ಕುಲ ಗೋತ್ರ
39. ಕುಸುಮ ಶ್ರೇಷ್ಠಿ ಆಳ್ವಿಕೆಯಲ್ಲಿ ಪೆನುಗೊಂಡೆ ರಾಜ್ಯ ಹೇಗಿತ್ತು ?
ಶಾಂತಿ,ಸಮೃದ್ದಿಗಳಿಂದ ಕೂಡಿತ್ತು. ಜನರು ನೆಮ್ಮದಿಯಿಂದ ಇದ್ದರು.
40. ವಾಸವಿಯ ಸಹೋದರ ಯಾರು ?
ವಿರೂಪಾಕ್ಷ.
Comments
Post a Comment