ವಟಸಾವಿತ್ರಿ ವ್ರತ ಕತೆ ಹಾಡಿನ ರೂಪದಲ್ಲಿ /vatasaavitri vratha song
ಪದ್ಯದ ರೂಪದಲ್ಲಿ
ವಟ ಸಾವಿತ್ರಿ ಕಥೆ
ಸಿಧ್ಧಿ ವಿನಾಯಕ ವಿದ್ಯ ಪ್ರದಾಯಕ ಲಡ್ಡಿಗಿ ಮೋದಕನಾ ನೆನೆದು
ಬುಧ್ಧಿಪ್ರದಳು ಶಾರದೆಗೊಂದಿಸಿ ನಿರ್ವಿಘ್ನದಿ ಕಥೆಯ ಪೇಳುವೆನು||ಪಲ್ಲ||
ಮದ್ರ ದೇಶದ ರಾಜ ಅಶ್ವಪತಿ ಎಂಬುವಗೆ ಸಂತಾನವಿಲ್ಲದೆ ಚಿಂತಿಸುತ
ಸವಿತೃ ನಾಮಕ ಸೂರ್ಯನ ತಪಸು ಮಾಡಲು ಹೆಣ್ಣು ಮಗುವು ತಾ
ಜನಿಸೆ||೧||
ಸವಿತೃ ನಾಮಕನ ದಯದಿಂದ ಪುಟ್ಟಲು ಸಾವಿತ್ರಿಯೆಂದು ಕರೆಯುತ್ತಲಿ
ಅವಳ ಜಾತಕ ರೀತ್ಯ ಗಂಡನಿಗೆ ಅಲ್ಪಾಯುಷ್ಯವೆಂದು ತಿಳಿಯುತ್ತಲಿ||೨||
ಮುದ್ದಾಗಿ ಬೆಳೆದಳು ಜವ್ವನೆಯಾಗಿ ಮದುವೆಯ ವಯಸು ಬಂದಿರಲು
ವರನ ಹುಡುಕುವ ಪ್ರಯತ್ನದಲ್ಲಿರಲು ನಾರದರು ತಿಳಿಸಿದರು ಸತ್ಯ
ವಾನನ||೩||
ಕುರುಡು ತಂದೆಯಾದ ದ್ಯುಮತ್ಸೇನನ ಸೇವೆಮಾಡುತ ಸತ್ಯವಾನನಿರಲು
ಅಲ್ಪಾಯುಷ್ಯದ ವಿಷಯವ ಮತ್ತೆ ಸಾವಿತ್ರಿಗೆ ತಿಳಿಸಿದರು ನಾರದರು||೪||
ಶನಿವಾರದಮವಾಸ್ಯೆ ಭರಣಿ ನಕ್ಷತ್ರದಿ ಸಾವಿತ್ರಿ ಯೌವನವತಿಯಾಗೆ
ಭರದಿ ಕರೆದಳು ಅತ್ತೆಯ ಬೇಗ ಅಂಗಳದಲಿ ತಾ ನಿಂತುಕೊಂಡು||೫||
ಅತ್ತೆಯ ಮನೆಯಲ್ಲಿ ಅತ್ಯಂತ ವಿನಯದಲಿದ್ದು ಸತ್ಯಮಾತ್ತಗಳ ನಾಡುತ್ತಲಿ
ಯಜ್ಞಕಾರ್ಯಕ್ಕೆ ಸಮಿಧೆಯ ತರಲು ಗಂಡಗೆ ತಿಳಿಸಿ ಹೇಳದಳು||೬||
ಗಂಡುಗೊಡಲಿಯನು ಹಿಡಿದುಕೊಂಡು ವಿಪ್ರ ಛಂದದಿಹೆಂಡುತಿಗೆ
ಹೇಳಿದನು
ಸಮಿಧೆಯನೆಲ್ಲ ಕೂಡಿಸಿಕೊಂಡು ಬರುವುದಾಗಿ ತಿಳಿಸಿದನು||೭||
ಹಾಗೆನನ್ನ ಬಿಟ್ಟು ಹೋಗಬೇಡಿರೆಂದು ಪಾವಕನಾಣೆ ಎನ್ನುತ್ತಲಿ
ಪಾವಕನಾಣೆ ಎನುತಲಿ ಸಾವಿತ್ರಿ ಎದುರಿಗೆ ಬಂದು ನಿಂತಳಾಗೆ||೮||
ಶಾಕಪಾಕಂಗಳ ಬೇಗನೆ ಮಾಡಿಅತ್ತೆ ಮಾವರಿಗೆ ಉಣಬಡಿಸಿ
ಅತ್ತೆಮಾವರಿಗೆ ಉಣಬಡಿಸಿ ತಾನು ಸಿಧ್ಧಾಗಿ ನಿಂತಳು ಪತಿಯೊಡನೆ||೯||
ನಿಮ್ಮ ಮಗನ ಕೂಡ ಅಡವಿಗೆ ಹೋಗುವೆನೆಂದು ಅತ್ತೆ ಮಾವರಿಗೆ
ನಮಸ್ಕರಿಸಿ
ಮುತ್ತಿನ ಸರಗಳ ಹವಳದ ಸರಗಳ ಬಿಚ್ಚಿ ತಾ ನಿಟ್ಟಳು ಮನೆಯೊಳಗೆ||೧೦||
ಕಿತ್ತುಳಿ ವನಗಳಿರ ಕಸ್ತೂರಿ ಕೊಳಗಳಿರ ಒಪ್ಪದಿ ಹರಿವ ನದಿಗಳಿರ
ನಿಂಬಿಯ ವನಗಳಿರ ತುಂಬಿದ ಕೊಳಗಳಿರನಮ್ಮ ಪತಿ ಬಂದನು ಎನ್ನುತ
||೧೧||
ಅರಳಿ ಅತ್ತಿಮರ ಆಲದ ಮರನೋಡು ನೇರಳೆ ನಿಂಬೆ ವನವ ನೋಡು
ನೇರಳೆ ನಿಂಬೆವನ ನೋಡೆ ಸಾವಿತ್ರಿ ಭೋರೆಂಬಹರಿವ ನದದಿಯ
ನೋಡೆ||೧೨||
ಬ್ಯಾಗ ಸಮಿಧಿಯ ತರಬೇಕೆಂದು ಹತ್ತಿದ ಮರವ ಬೇಗ ತಾನು
ಒಂದೊಂದು ಟೊಂಗಿಯ ಕಡಿದು ಹಾಕುತಲಿದ್ದ ಬಂದಿತು ತಲೆನೋವು
ಘನವಾಗಿ||೧೩||
ಕಾಗೆಯು ಕೂಗಲು ತಲ್ಲಣಿಸುತ ಮನದಲ್ಲಿಕಾಲನೆ ಬಂದನೆಂದು ತಿಳಿದು
ನಾಲಗೆ ವಣಗಿತು ಬಾಡಿತು ಮುಖವು ಕಸವುಸಿ ಆಯಿತು ಮನದಾಗೆ
೧೪||
ಮರವನಿಳಿದ ವಿಪ್ರ ಮಡದಿಯ ತೊಡಿಮೇಲೆ ವರಗಿದ ತಲೆನೋವು
ಘನವಾಗೆ
ಕಳವಳಗೊಂಡಳು ಮನದಲ್ಲಿ ತಾನು ಎಲ್ಲಿಂದೆಲ್ಲಿ ವಿಧಿ ತಂತು||೧೫||
ಅಂಬರದ ಯಾನವನೆ ಇಳಿದನು ಯಮರಾಯ ಬಂದೋರ್ಯಾರೆಂದು
ನೋಡುತ್ತಲಿ
ತೊಡಿಯ ಮೇಲಿದ್ದ ಪತಿಯ ನೆಲದ ಮೇಲ್ ಮಲಗಿಸಿ ಯಮ ಧರ್ಮಗೆ
ಬಂದು ವಂದಿಸುತ||೧೬||
ಮುತ್ತೈದೆಯಾಗೆಂದು ಹರಸಿದ ತಾನುಪುತ್ರರ ಪಡೆಯೆಂದು ನುಡಿದನಾಗ
ನುಡಿದ ಮಾತನೆ ಕೇಳಿ ತಾ ಬೇಗ ಶೆರಗನೆ ಗಂಟು ಕಟ್ಟಿದಳು
||೧೭||
ಖಂಡುಗ ಧಾನ್ಯವನೀವೆ ಸಾವಿತ್ರಿಉಂಬುವುದಕ್ಕೆ ಅನ್ನವನೀವೆ
ಗಂಡನ ಪ್ರಾಣ ಒಂದನ್ನೆ ಬಿಟ್ಟು ಕೇಳೆಂದ ಯಮಧರ್ಮಯಾಯ ತಾನು||೧೮||
ಪುತ್ರರ ಪಡಿಯೆಂದು ಹರಸಿದಿರೀಗ ಪತಿಯನ್ನ ನೀವು ಕರೆದೊಯ್ದರೆ
ಪುತ್ರರನ್ನ ಯಾರಿಗೆ ಪಡೆಯಲಿಯೆಂದುಕೇಳಿದಳು ಸಾವಿತ್ರಿ ಧೈರ್ಯ
ದಿಂದ||೧೯||
ನಿನ್ನ ಮಾತಿಗೆ ಮೆಚ್ಚಿದೆನು ಸಾವಿತ್ರಿ ತಕ್ಕ ವರಗಳ ಕೇಳೆಂದನು
ಅಂಧಕ ಮಾವಗೆ ಕಂಗಳು ಬರಬೇಕುನಮ್ಮ ರಾಜ್ಯ ನಮಗೆ ಬೇಕೆಂದಳು||೨೦||
ಹೊನ್ನ ಬುಟ್ಟಿಯಲಿ ಹಾಕಿದನು ಆಯುಷ್ಯವಹಿಡಿಯೆಂದು ನುಡಿದನು
ಯಮನಾಗ
ಭೂಮಿಯ ಮೇಲಿನ ಮನುಜರಿಗೆ ಮಾತ್ರದಾರಿಯ ತೋರದಿರು ಎಂದ||೨೧||
ನಿದ್ದೆಯಿಂದೆದ್ದಂತೆಎದ್ದನು ಸತ್ಯವಾನ ಇಬ್ಬರೊಂದಾಗಿ ಮನೆಗೆ ಬಂದು
ದರ್ಭೆ ಸಮಿಧೆಯ ನೆಲದ ಮೇಲಿರಿಸಿದ ತಿಳಿಸಿದ ಅಡವಿಯ ಚರಿತೆಯನ||೨೨||
ಅತ್ತೆ ಮಾವರ ಚರಣಕ್ಕೆ ಎರಗುತ್ತನಿಮ್ಮ ಪುಣ್ಯದ ಫಲವೆನ್ನಲು
ಕಂಗಳು ಬಂದವು ರಾಜ್ಯವು ಬಂದಿತುಸಾವಿತ್ರಿಯ ವ್ರತ ಮಹಿಮೆಯೆಂದ||೨೩||
ವಟವೃಕ್ಷದಡಿಯಲ್ಲಿಸಾವಿತ್ರಿ ದೇವರ್ನಧ್ಯಾನಿಸೆಯಮಧರ್ಮ ಒಲಿದನೆಂದು
ವಟ ಸಾವಿತ್ರಿಯೆಂದು ಹೆಸರಾಗಿ ಮುತ್ತೈದೆತನವ ಪಡೆದಾಳು||೨೪|<
ಶನಿವಾರದಮವಾಸ್ಯೆ ಹೇಳೋರಿಗೆ ಕೇಳೋರಿಗೆಮುತ್ತೈದೆ ತನವಕ
ಕೊಡುವೋಳು
ಮುತ್ತೈದೆತನವ ಕೊಡುವೋಳು ಸಾವಿತ್ರಿ ಎಂತೆಂದು ಮಧ್ವೇಶ ಕೃಷ್ಣ
ಹರಸೀದ||೨೫||
Comments
Post a Comment