Home remedies for kids ll stomach upset ll ಮಕ್ಕಳ ಹೊಟ್ಟೆನೋವಿಗೆ ಕೆಲವು ಮನೆಮದ್ದುಗಳು

home remedies for kids stomach upset
ಮಕ್ಕಳಲ್ಲಿ ಹೊಟ್ಟೆನೋವು ನಾನಾ ಕಾರಣಗಳಿಂದ ಬರುತ್ತದೆ. ಮೊದಲು ಯಾವುದರಿಂದ ಬಂದಿದೆ ಎಂದು ಅರಿತು ಅದಕ್ಕೆ ಸರಿಯಾದ ಪರಿಹಾರ ಮಾಡಬೇಕು. ಅಜೀರ್ಣ,ವಾಯು,ಮಲಬದ್ಧತೆ,ಜಂತುಹುಳು,ಹೊಟ್ಟೆ ಉಬ್ಬರ, ಇನ್ನು ಮುಂತಾದ ಕಾರಣಗಳಿಂದ ಹೊಟ್ಟೆ ನೋವು ಇತ್ಯಾದಿ ಬರುತ್ತದೆ. ನನ್ನ ಸಂಗ್ರಹದಲ್ಲಿರುವ ಕೆಲವು ಪರಿಹಾರಗಳನ್ನು ಪೋಸ್ಟ್ ಮಾಡಿದ್ದೇನೆ. ಯಾವುದಕ್ಕೆ ಯಾವುದು ಮಾಡಬೇಕೆಂದು ಅರಿತು ಮಾಡಿದರೆ ಉತ್ತಮ. ಹಿಂಗ್ವಷ್ಟ್ ಕ ಚೂರ್ಣ ಹೇಗೆ ಮಾಡುವುದೆಂದು ಪೋಸ್ಟ್ನಲ್ಲಿ ತಿಳಿಸಿದ್ದೇನೆ. ಅದನ್ನು ಉಪಯೋಗಿಸಿದರೆ ಮೇಲೆ ಹೇಳಿದ ಎಲ್ಲ ಸಮಸ್ಯೆ ನಿವಾರಣೆ ಆಗುವುದು. ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರೂ ಉಪಯೋಗ ಮಾಡಬಹುದು. ಈ ಕೆಳಗಿನ ಮನೆಮದ್ದು ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಶಿಶುಗಳಿಗೆ ಬೇರೆ ಒಂದು ಪೇಜಿನಲ್ಲಿ ಬರೆದಿದ್ದೇನೆ. ಸಣ್ಣ ನವಜಾತ ಶಿಶುಗಳಿಗೆ ಯಾವುದು ಸೂಕ್ತವೋ ನೋಡಿಕೊಂಡು ಮಾಡಬೇಕು. ಸ್ವಲ್ಪ ದೊಡ್ಡ ಮಕ್ಕಳಿಗೆ ಯಾವುದು ಮಾಡಿದರು ತೊಂದರೆ ಇಲ್ಲ. ಮನೆಮದ್ದು ಉಪಯೋಗಿಸಿ. ಆರೋಗ್ಯವಾಗಿ ಇರಿ..




Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು