ಜಲದ ಮಹತ್ವ ll Significance of water

ಜಲದ ಮಹತ್ವ

ಹಿಂದೆ ಒಂದು ಮಾತನ್ನು ನಮ್ಮ ಹಿರಿಯರು ಹೇಳುತ್ತಾ ಇದ್ದರು .
ಋಷಿ ಮೂಲ, ಸ್ತ್ರೀ ಮೂಲ, ಜಲಮೂಲ ಹುಡುಕಬಾರದೆಂದು. ಆದರೂ ಜಲಮೂಲ ಹುಡುಕುವ ಕ್ರಿಯೆ ಮಾತ್ರ ನಿತ್ಯ ನಿರಂತರ. ಅದು ಮನುಷ್ಯನ ಬದುಕೇ ಆಗಿದೆ. ಪಂಚಭೂತಗಳಲ್ಲಿ ಒಂದಾದ ನೀರು, ಮಾನವನ ಪಂಚಪ್ರಾಣವೂ ಹೌದು. ಭೂಮಿಯಲ್ಲಿ ನೀರು ಎಲ್ಲಾ ಕಡೆ ಇದೆ. ಜಗತ್ತು ಅಂದಾಜು ಎಪ್ಪತ್ತು ಪಾಲು ನೀರಿನಿಂದ ಆವೃತವಾಗಿದೆ. ಮಾನವ ಶರೀರದಲ್ಲೂ ಹೆಚ್ಚುಕಮ್ಮಿ ಅಷ್ಟೇ ನೀರಿದೆ ಎಂದು ಹೇಳಲಾಗಿದೆ. ಇಂತಹ ನೀರು ದೇಹದ ಮೇಲೆ ಪ್ರಭಾವ ಬೀರಿದಷ್ಟೇ ಮನಸ್ಸಿನ ಮೇಲೂ ಪ್ರಭಾವ ಬೀರುತ್ತದೆ ಎಂದರೆ ನಂಬಲೇಬೇಕು.

ಜಲ ಪದವನ್ನು ನಾವು ಸಾಮಾನ್ಯವಾಗಿ ಪೌರಾಣಿಕ ಮತ್ತು ಧಾರ್ಮಿಕ ಸಂದರ್ಭಗಳಲ್ಲಿ ಬಳಸುತ್ತೇವೆ. ಉದಾಹರಣೆಗೆ, ದೇವರ ಅಭಿಷೇಕಕ್ಕೆ ಅಥವಾ ಪವಿತ್ರ ಕಾರ್ಯಗಳಿಗೆ ಜಲ ಪದವನ್ನು ಬಳಸುತ್ತೇವೆ.

ಜಲದ ಮಹತ್ವವು ವೇದಗಳಲ್ಲಿ ಬರುವದು.

ಜಲಕ್ಕೆ
ಪರ್ಯಾಯ ಪದ  ಅಪ
ಎಂದು ಹೇಳಬಹುದು.
ಅಪ್ ಪದವು ಸಂಸ್ಕೃತ ಶಬ್ದವಾಗಿದೆ, ಇದನ್ನು ನಾವು ಹೆಚ್ಚು ಪೌರಾಣಿಕ ಸಾಹಿತ್ಯದಲ್ಲಿ ಕಾಣಬಹುದು.
ಅಪೋಹಿಷ್ಠಾ ಮಯೋಭುವಃ ,
ಅಗ್ನೇರಪಃ, ಹೀಗೆ 
 ವೇದಗಳಲ್ಲಿ ಹೇಳಲಾಗಿದೆ.
ನೀರಿಗೆ ಸಂಸ್ಕೃತದಲ್ಲಿ ಸುಮಾರು 250 ಶಬ್ದಗಳಿವೆ.

 ಸ್ವಯಂ ಪ್ರಕಟವಾದ ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ, ಜಲದಿoದ ಭೂಮಿ, ಭೂಮಿಯಿಂದ ಸಸ್ಯಗಳು, ಸಸ್ಯಗಳಿಂದ ಆಹಾರ, ಆಹಾರದಿಂದ ಜೀವಿ. ಜೀವಿಗಳಿಂದ ಸೃಷ್ಟಿ ಹೀಗೆ ಮುಂದುವರೆಯುತ್ತದೆ.
ಈ ಕಾರಣಕ್ಕಾಗಿ
ಅನಾದಿ ಕಾಲದಿಂದಲೂ  ಪಂಚಭೂತಗಳಾದ ಆಕಾಶ,ವಾಯು,ಅಗ್ನಿ,
ಜಲ, ಭೂಮಿ ಇತ್ಯಾದಿಗಳನ್ನು ದೇವರೆಂದು ಪೂಜಿಸುತ್ತಾ ಬರಲಾಗಿದೆ.

ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಜಲದ ಬಗ್ಗೆ ಉಲ್ಲೇಖಗಳನ್ನು ಕಾಣಬಹುದು. ಮುಖ್ಯವಾಗಿ, ವೇದಗಳು, ಪುರಾಣ ಗಳು, ಮೇಘಮಾಲಾ, ಮಹಾಭಾರತ, ಮಯೂರ ಚಿತ್ರಕಾ, ವೃತಸಂಹಿತಾ ಮುಂತಾದ ಪುರಾತನ ಕೃತಿಗಳಲ್ಲಿ  ಜಲದ ಪರಿಕಲ್ಪನೆಗಳಿವೆ.

 ಸೃಷ್ಟಿಯನ್ನು ಮುಂದುವರಿಸಲು ಭಗವಾನ್ ವಿಷ್ಣು ಮೊದಲ ಅವತಾರ ತಾಳಿದ್ದು ಮತ್ಸ್ಯ ಅವತಾರ.
 ಅದು ನೀರಿನಲ್ಲಿ ಹೊರಹೊಮ್ಮಿತ್ತು ಮತ್ತು ಸೃಷ್ಟಿ ಪ್ರಾರಂಭವಾಗಲು ಸಪ್ತಋಷಿಗಳ ಜೊತೆಗೆ ಮನುವನ್ನು ಜಲದ ಮೂಲಕ ಮಾರ್ಗದರ್ಶನ ಮಾಡಿತ್ತು. ಅಂದರೆ, ಸೃಷ್ಟಿಯು ಜಲದಿಂದ ಹೊರಹೊಮ್ಮಿತು ಮತ್ತು ಅದು ಮತ್ತೆ ಜಲದಲ್ಲಿ ಕೊನೆ ಆಗುತ್ತದೆ. ಈ ಸೃಷ್ಟಿಯಂತೆಯೇ ನಮ್ಮ ದೇಹವೂ ನೀರಿನಿಂದಲೆ ಸೃಷ್ಟಿ ಆಗುತ್ತದೆ. ಜಲ ಎನ್ನುವುದು ನಮ್ಮ ದೇಹದಲ್ಲಿ ಸ್ವಾದಿಷ್ಠಾನ ಚಕ್ರದ ಆಡಳಿತ ಅಂಶವಾಗಿದೆ, ಇದು ಸಂತಾನೋತ್ಪತ್ತಿಯ ಕಾರ್ಯಕ್ಕೆ ಕಾರಣವಾಗಿದೆ. ಅಂತೆಯೇ, ದೇಹವು ನಾಶವಾದಾಗ, ಅಂತಿಮ ವಿಧಿಗಳ ನಂತರ, ನೀರಿಗೆ ಹಿಂತಿರುಗಿಸಲಾಗುತ್ತದೆ. 

 ಹೀಗೆ ಬ್ರಹ್ಮಾಂಡದ ಮತ್ತು ಪಿಂಡಾಂಡದ ಸೃಷ್ಟಿಗೆ ನೀರಿನ ಅಥವಾ ಜಲ ತತ್ವದ ಮಹತ್ವ ಒಂದು ರೀತಿ ಕಾರಣವಾಗಿದೆ ಎಂದು ಹೇಳಬಹುದು.

Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು